ಮೆಜೆಲಾನಿಕ್ ಮೇಘಗಳು   - 
 	ಬ್ರಹ್ಮಾಂಡೀಯ ವ್ಯವಸ್ಥೆಗೆ ಅತ್ಯಂತ ಸಮೀಪ ಇರುವ ನಾಕ್ಷತ್ರಿಕ ಮೇಘಗಳಿಂದ ಒಡಗೂಡಿದ, ದಕ್ಷಿಣ ಅರ್ಧಗೋಳಾಕಾಶದ, ಸ್ವತಂತ್ರವಾದ ಎರಡು ಬ್ರಹ್ಮಾಂಡಗಳು (ಮೆಜೆಲಾನಿಕ್ ಕ್ಲೌಡ್ಸ್), ಬ್ರಹ್ಮಾಂಡಗಳ ಸ್ಥಳೀಯ ಗುಂಪಿಗೆ (ಲೋಕಲ್ ಗ್ರೂಪ್) ಸೇರಿದೆ. ಪೋರ್ಚುಗಿಸ್ ನಾವಿಕ ಫರ್ಡಿನೆಂಡ್ ಮೆಜೆಲಾನ್ (ಸು.1480-1521) ಎಂಬವ ಇವನ್ನು ಮೊದಲಿಗೆ ವೀಕ್ಷಿಸಿದ್ದರಿಂದ ಈ ಹೆಸರು ಬಂದಿದೆ. ಇವನ್ನು ದೊಡ್ಡ ಮೆಜೆಲಾನಿಕ್ ಮೇಘ (ಲಾರ್ಜರ್ ಮೆಜೆಲಾನಿಕ್ ಕ್ಲೌಡ್-ಐಒಅ) ಮತ್ತು ಚಿಕ್ಕ ಮೆಜೆಲಾನಿಕ್ ಮೇಘ (ಸ್ಮಾಲರ್ ಮೆಜೆಲಾನಿಕ್ ಕ್ಲೌಡ್-Sಒಅ) ಎಂದು ವರ್ಗೀಕರಿಸಿದೆ. ಮೊದಲನೆಯದು Iಡಿ I ಪ್ರರೂಪದ್ದು; ಎರಡನೆಯದು Iಡಿ II ಪ್ರರೂಪದ್ದು. ಅಮೆರಿಕದ ಖಗೋಳವಿಜ್ಞಾನಿ ಎಡ್ವಿನ್ ಪೊವೆಲ್ ಹಬ್ಬಲ್ (1889-1953) ವರ್ಗೀಕರಣದಲ್ಲಿ ಇವು ಇರ್ರೆಗ್ಯುಲರ್ ಗ್ಯಾಲಾಕ್ಸೀಸ್- ಎಂದರೆ ಯಾವುದೇ ಬಗೆಯ ರಚನೆಯನ್ನಾಗಲಿ ಸಮಾಂಗತೆಯನ್ನಾಗಲಿ ಪ್ರದರ್ಶಿಸಿಸುವ ಬ್ರಹ್ಮಾಂಡಗಳು. ಇದನ್ನು ಸಾಮಾನ್ಯವಾಗಿ ರಾತ್ರಿಯ ನಿರ್ಮಲ ಆಕಾಶದಲ್ಲಿ ಬರಿಯ ಕಣ್ಣಿನಿಂದಲೇ ನೋಡಬಹುದು. ಇವು ಅನುಕ್ರಮವಾಗಿ ಸುಮಾರು 94,000 ಬೆಳಕುವರ್ಷ ಮತ್ತು 84,000 ಬೆಳಕುವರ್ಷಗಳ ದೂರದಲ್ಲಿವೆ. ಇವುಗಳ ತೋರ್ಕೆ ವ್ಯಾಸ (ಅಕಾಶತಲದ ಮೇಲೆ) ಅನುಕ್ರಮವಾಗಿ 70 ಮತ್ತು 40. ಇವು ಆಕಾಶ ಗಂಗೆಯಿಂದ (ನಮ್ಮ ಗ್ಯಾಲಕ್ಸಿ) ಕೊಂಚ ಮಾತ್ರ ಹೊರಗಿವೆ. ಇವನ್ನು ನಮ್ಮ ಬ್ರಹ್ಮಾಂಡದ ಸಂಗಾತಿಗಳು ಎಂದು ಸಂಬೋಧಿಸುವುದೂ ಉಂಟು. ಕರ್ನಾಟಕದಿಂದ ಇವನ್ನು ಕಾಣಬಹುದಾದರೂ ದಕ್ಷಿಣದ ಖಂಡಗಳಿಂದ ಸುಲಭವಾಗಿ ಗುರುತಿಸಬಹುದು.

  ನಮ್ಮದರಂತೆಯೇ ಇರುವ ಇತರ ಬ್ರಹ್ಮಾಂಡಗಳ ಅಸ್ತಿತ್ವವನ್ನು ಅನೇಕ ಖಗೋಳ ವಿಜ್ಞಾನಿಗಳು 1930ರ ಕಡೆಯ ದಶಕದ ತನಕವೂ ಒಪ್ಪಿಕೊಂಡಿರಲಿಲ್ಲ. ಇಪ್ಪತ್ತನೆಯ ಶತಮಾನದ ಪ್ರಾರಂಭದ ದಶಕಗಳಲ್ಲಿ ಮೆಜೆಲಾನಿಕ್ ಮೇಘಗಳ ದೂರಗಳನ್ನು ಕುರಿತ ತಪಾಸಣೆಯೂ ನಡೆದಿತ್ತು.  ಹಾರ್ವರ್ಡ್ ವೀಕ್ಷಣಾಲಯದಲ್ಲಿ ಕೆಲಸ ಮಾಡುತ್ತಿದ್ದ ಹೆನ್ರೀಟ ಲಿವಿಯವಿಟ್ ಎಂಬ ಖಗೋಳವೀಕ್ಷಕಿಗೆ 1912ರಲ್ಲಿ ಒಂದು ಸುಳಿವು ದೊರೆಯಿತು. ದಕ್ಷಿಣ ಅಮೆರಿಕದ ಪೆರು ರಾಷ್ಟ್ರದ ಅರೆಸಿಬೋ ಎಂಬ ಸ್ಥಳದಲ್ಲಿ ಸ್ಥಾಪಿಸಲಾಗಿದ್ದ ಹಾರ್ವರ್ಡ್ ದೂರದರ್ಶಕವನ್ನು ಬಳಸಿ ತೆಗೆದಿದ್ದ ಛಾಯಾಚಿತ್ರಗಳನ್ನು ಈಕೆ ಕಳೆದ ನಾಲ್ಕು ವರ್ಷಗಳಿಂದಲೂ ಅಧ್ಯಯನಮಾಡುತ್ತಿದ್ದಳು. ಎರಡೂ ಮೆಜೆಲಾನಿಕ್ ಮೇಘಗಳ ಬಗ್ಗೆ ವಿಶೇಷ ಗಮನವಿತ್ತಿದ್ದಳು. ಇದರಿಂದ ಈ ಮೇಘಗಳಲ್ಲಿ ಸಿಫೀಯಿಡ್ಡುಗಳೆಂಬ ಚಂಚಲ ನಕ್ಷತ್ರಗಳ ಬಗ್ಗೆ ವಿಶೇಷ ಗಮನವಿತ್ತಿದ್ದಳು. ಈ ಮೇಘಗಳಲ್ಲಿ ಸಿಫೀಯಿಡ್ಡುಗಳೆಂಬ (ಗಾತ್ರದಲ್ಲಿ ಅಗುವ ಸಂಕೋಚನೆ ಮತ್ತು ವ್ಯಾಕೋಚನೆಗಳ ಸಲುವಾಗಿ ತಮ್ಮ ಉಜ್ವಲತೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಪ್ರದರ್ಶಿಸುವ ಚಂಚಲ ಕಾಂತೀಯ ನಕ್ಷತ್ರಗಳು ಇವು) ನಕ್ಷತ್ರಗಳು ಇರುವುದೂ ಸ್ಥಿರಪಟ್ಟಿತು. ಕೇವಲ ಎರಡು ದಿವಸಗಳಷ್ಟು ಕಡಿಮೆ ಅವರ್ತನ ಅವಧಿಯುಳ್ಳ ಸಿಫಿಯಿಡ್ಡುಗಳೂ ಒಳಗೊಂಡಿರುವಂತೆ ಇರುವ ಕಾಂತಿಮಾನ ಶ್ರೇಢಿಯೊಂದನ್ನು ರಚಿಸಿ ಸಿಫೀಯಿಡ್ ನಕ್ಷತ್ರಗಳಿಗೆ ಆವರ್ತನಾವಧಿ ಉಜ್ಜ್ವಲತೆಯ (ರೊಟೇಷನ್-ಲ್ಯೂಮಿನಾಸಿಟಿ) ಸಂಬಂಧವನ್ನು ಪಡೆದುಕೊಳ್ಳಲಾಗಿದೆ. ಈ ಕೆಲಸದಿಂದ ಅವಧಿ ಮತ್ತು ಕಾಂತಿಮಾನಗಳ ನಡುವಿನ ಸಂಬಂಧ ಮತ್ತಷ್ಟು ಪರಿಷ್ಕಾರಗೊಳ್ಳುವಂತಾಯಿತು. ಬಾಹ್ಯಬ್ರಹ್ಮಾಂಡಗಳನ್ನು ಕುರಿತಂತೆ ಹೇಳುವ ದೂರಗಳ ನಿರ್ಧರಣೆಯಲ್ಲೂ ಈ ತಿದ್ದುಪಡಿ ಗಮನಾರ್ಹ ಪರಿಣಾಮ ಉಂಟುಮಾಡಿತು. ಷ್ಯಾಪ್ಲೀ ಎಂಬ ಖಗೋಳವಿಜ್ಞಾನಿ ಈ ಮೇಘಗಳ ದೂರಗಳನ್ನು ಗಣಿಸಿ ಚಿಕ್ಕ ಮೆಜೆಲಾನಿಕ್ ಮೇಘ 94,000 ಬೆಳಕು ವರ್ಷಗಳ ದೂರದಲ್ಲಿದೆಯೆಂದೂ ದೊಡ್ಡ ಮೆಜೆಲಾನಿಕ್ ಮೇಘ 84,000 ಬೆಳಕುವರ್ಷಗಳ ದೂರದಲ್ಲಿದೆಯೆಂದೂ ಪ್ರಕಟಿಸಿದ (1918). ಇದರಿಂದ ಈ ಬ್ರಹ್ಮಾಂಡಗಳು ನಮ್ಮ ಬ್ರಹ್ಮಾಂಡದ ಅಚೆಗೆ ಇರುವುದು ಸ್ಥಿರಪಟ್ಟಿತು.

  ಈ ಮೇಘಗಳ ಆವರ್ತನಾವಧಿಗಳನ್ನು ಃ ಮತ್ತು ಂ ಮಹಾದೈತ್ಯನಕ್ಷತ್ರಗಳು ಹಾಗೂ ಪ್ರದೇಶಗಳ ಪ್ರಕಾಶೀಯ ಆರೀಯ ವೇಗ (ಆಪ್ಟಿಕಲ್ ರೇಡಿಯಲ್ ವೆಲಾಸಿಟಿ) ಮಾಪನಗಳ ಸಹಾಯದಿಂದ ಮೊದಲಿಗೂ ತಟಸ್ಥ ಹೈಡ್ರೋಜನ್ನಿನ 21 ಸೆಂ ಮೀ ರೇಖೆಯನ್ನು ಬಳಸಿಕೊಂಡು ನಡೆಸಿದ ರೇಡಿಯೋ ವೀಕ್ಷಣೆಗಳಿಂದ ಅನಂತರವೂ ಗಣಿಸಲಾಯಿತು. 21 ಸೆಂ ಮೀ ರೇಡಿಯೋ ದತ್ತಾಂಶಗಳನ್ನು ಬಳಸಿಕೊಂಡು ನಡೆದುದಕ್ಕಿಂತಲೂ ದೊಡ್ಡ ಮೆಜೆಲಾನಿಕ್ ಮೇಘದ ಅವರ್ತನಾ ವೇಗ ಪ್ರಕಾಶೀಯ ದತ್ತಾಂಶಗಳನ್ನು ಬಳಸಿಕೊಂಡು ನಡೆಸಿದ ವೀಕ್ಷಣೆಗಳು ಎರಡು ಮಡಿ ಹೆಚ್ಚಾಗಿದ್ದುದು ಕಂಡುಬಂದಿದೆ.  ಈ ವ್ಯತ್ಯಾಸವಾದರೂ ಮೂಲಭೂತ ತಲದ ಒಳಗೆ ಇರುವ ಮತ್ತು ಆ ತಲದ ಮೇಲೆ ಇರುವ ಬಿಂದುಗಳ ನಡುವಿನ ದೊಡ್ಡ ಮೆಜಲಾನಿಕ್ ಮೇಘದ ಅವರ್ತನ ಚಲನೆಯಲ್ಲಿ ವಿಚರಣೆಯನ್ನು ತೋರಿಸುವುದೆಂದು ಹೇಳಲಾಗಿದೆ.

  ಮೆಜೆಲಾನಿಕ್ ಮೇಘಗಳ ಅಧ್ಯಯನದಿಂದ ಉಜ್ಜ್ವಲ ಃ ಮತ್ತು ಂ ತಾರೆಗಳು, ರಕ್ತಮಹಾದೈತ್ಯಗಳು (ರೆಡ್ ಸೂಪರ್‍ಜಯೆಂಟ್ಸ್) ಮತ್ತು ಪ್ರಸಾಮಾನ್ಯ ನವತಾರೆಗಳ (ನಾರ್ಮಲ್ ನೋವೆ) ನೈಜಕಾಂತೀಯತೆಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿದೆ. ಇನ್ನೂ ಅಧಿಕ ದೂರದಲ್ಲಿಯ ಬ್ರಹ್ಮಾಂಡಗಳ ದೂರಗಳನ್ನು ಗಣಿಸುವಲ್ಲಿ ಇಂಥ ಕಾಯಗಳನ್ನು ಸೂಚಕಗಳನ್ನಾಗಿ ಬಳಸಿಕೊಳ್ಳುವುದಿದೆ. 											*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ